Monday, September 15, 2014




.......HAPPY ENGINEERS DAY .....

ಅಂದಿಗು ಇಂದಿಗು ಹೋಲಿಕೆ ಇಲ್ಲದ ದಿನಗಳು .....
ಅಂದು ECE,CS,EEE,IS,Mech,Civil Branch ಗಳು ...  ಇಂದು Software/Testing/ QA Engineer ಗಳು ..
ಅಂದು Diode,Capacitor,Transistor ಗಳು ...ಇಂದು Java,C,C++,.net Programming Language ಗಳು .. 
ಅಂದು Internal/External Examಗಳು ... ಇಂದು Software Estimation/Timeline/Deadline ಗಳು
ಅಂದು Lecturer ಗಳ ಬೈಗುಳಗಳು ...ಇಂದು TL ಗಳ feedback ಗಳು ... 
ಅಂದು ದೊಡ್ಡ GROUND ಲಿ Cricket/Volleyball ಆಟಗಳು ..ಇಂದು Office Cubicle ಲಿ ನಾವುಗಳು ನಮ್ಮ ಜೊತೆಯಲಿ Keyboard,Mouse,Monitor ಗಳು ...
ಅಂದು Night Out Joke/Cinema ಗಳು .. ಇಂದು Overnight Office ಕೆಲಸಗಳು ...
ಅಂದು Marks Card ಲಿ Marks ಗಳನು ನೋಡುತಿಹ ದಿನಗಳು ...ಇಂದು Salary Statement ನೋಡುತಿಹ ಕಣ್ಣುಗಳು ...
ಅಂದು ಸಂತೋಷವನು ನೋಡುತಿಹ ಮನಸ್ಸುಗಳು ... ಇಂದು ದುಡ್ಡಿನ ಕಡೆ ಮುಖ ಮಾಡಿದ ದಿನಗಳು ...

- ಪವನ್


Tuesday, April 8, 2014

ತಾಳ್ಮೆ...



ಸುಡುಬಿಸಿಲಿನ ತಾಪಕೆ ಮುದುಡಿದ ಗಿಡವು ಬಹುದಿನದಿ ಅಪೇಕ್ಷಿಸುತಿಹ ಆ ಒಂದು ಹನಿ ನೀರು
ಗುಡುಗಿನ ಸದ್ದಿನಲ್ಲಿ ಮಿಂಚಿನ ನಡುವಲಿ ಮೋಡ ಕರಗಿ ನೀರಾಗಿ ನಿನ್ನ ಮೇಲೆ ಬೀಳುತಿರಲು
ಉಲ್ಲಾಸವು ಚಿಗುರೊಡೆದು ಭವಿಷ್ಯತ್ ಅನ್ನೋ ಹಸಿರು ಕಂಗೊಳಿಸುತಿಹ ಈ ಕ್ಷಣದಲಿ
ನಿನ್ನ ನಾ ನೋಡಿ ಕಲಿತೆ ಜೀವನವೊಂದು ನಶ್ವರ
ಮನವೇ ನೀ ಎಂದೆಂದೂ ಮರುಗಬೇಡ 
ನಿನ್ನ ಸಮಯ ಬಂದೆ ಬರುತದೆ ಒಂದು ದಿನ
ಆ ಒಂದು ಸಣ್ಣ ಹನಿಗೆ ತಾಳ್ಮೆಯಿರಲಿ ನಿರಂತರ... 

Tuesday, February 26, 2013

ಚೆನ್ನೈ MATCH...

ಚೆನ್ನೈ PITCH ಚೆಂದಾನ  ...
ನಮ್ಮೂರ ಗದ್ದೆ ಅಂದಾನ ....
ಧೋನಿಯ SIX ನೋಡೋಣ ..
ಅಶ್ವಿನ್ ನ  SPIN ಅಳೆಯೋಣ ...
ಕೊಹ್ಲಿಯ  ಹಾಡಿ  ಹೊಗೊಳೋಣ ...
ಸಚಿನ್ ಗೆ SALUTE ಮಡೋಣ  ...
ಎಲ್ಲರೂ  ಸೇರಿ CRICKET ಆಡೋಣ ..
NEXT WIN ಗೆ ಕಾಯೋಣ ....

Thursday, November 1, 2012

ಹೀಗೆ ತಮಾಷೆಗೆ ....


ಹಳೆ  DOVE CALL ಗೆ  WAIT ಮಾಡಬೇಡ .... ಹೊಸ  ಹುಡುಗಿ  CALL ನ  WAITING ಲಿ  ಇಡಬೇಡ  ....

ನೀನೆ ನನ್ನ ಉಸಿರು ಅಂತ ಬೊಗಳೆ ಬಿಡಬೇಡ ...EMERGENCY ಗೆ ಅವಳ ತಂಗಿಯ ಹೆಸರು ಕೇಳೋಕೆ  ಮರೆಯಬೇಡ  ....

MEGA SERIAL ತರ LOVE ನ ಏಳಿಬೇಡ ...ಹುಡುಗಿಯರ ಮನಸ್ಸು ADVERTISE ತರ  ಅವಾಗಾವಾಗ  CHANGE ಆಗ್ತಾ  ಇರತ್ತೆ TENSION ಆಗಬೇಡ ...

ಕಣ್ಣು ಮುಚ್ಕಂಡು PROPOSE ಮಾಡಬೇಡ ...ಆಮೇಲೆ ಪ್ರೀತಿ ಕುರುಡು ಅನ್ನಬೇಡ ...

ಅವಳ ಮುಂದೆ ಬೇರೆ PIGURE ನ ನೋಡಬೇಡ ...ಮುಂಜಾಗುರುಕತೆಯ ಕ್ರಮವಾಗಿ COOLING GLASS ಹಾಕೋಳೋಕೆ  ಮರೆಯಬೇಡ ...

CAT WALK ಲಿ ಬರ್ತಾಳೆ ...ಅವಾಗವಾಗ ಗಂಡನ ಜೊತೆ ಕಣ್ಣಿಗೆ ಬೀಳುತ್ತಾಳೆ ....ಕನಸಲಿ HIII ಅಂತಾಳೆ ...108 ತರ FAST AND FURIOUS ಆಗಿ   ವಪಾಸ್  ಹೋಗ್ತಾಳೆ ...

ಅಲ್ಲಿಗೆ ಹುಡುಗರ ಮೊದಲನೆಯ SLIDE SHOW ಮುಕ್ತಾಯ ....

Sunday, September 23, 2012

ಓತ್ಲಾ ಓತ್ಲಾ ಓತ್ಲಾ....




ಅಂದು ನಾ ನೋಡಿದೆ ನಿನ್ನನೆ ...
ಮನಸ್ಸು ಓತ್ಲಾ ಹೊಡೆಯಿತು ಸುಮ್ಮನೆ....
ಇದು LOVE @ FIRST SIGHT ನನ್ನಾಣೆ ...
HEART ಲಿ ಅಚ್ಚಾಗಿ ಉಳಿದಳು ಆ ಕನ್ಯೆ ...
ಮುಡುಪಾಗಿಡುವೆ ನಿನಗಾಗಿ ನನ್ನ ಜೀವನವನ್ನೇ ...
ನಿನ್ನ ಗುಂಗಲಿ ಮರೆತೆ ಜಗವನ್ನೇ ...ನನಗರಿಯದೆ ಕೈ ಕೊಟ್ಟಳು ಮೊನ್ನೆ ...
HANDSOME ಹುಡುಗನ ಜೊತೆ ಮದುವೆ  ನಿನ್ನೆ ...
ನೆನಪಾಯಿತು ಒನಕೆ ಓಬವ್ವಳ ದೊಣ್ಣೆ ...
ಜೀವನವಾಯಿತು ದೊಡ್ಡ ಸೊನ್ನೆ ...
ಎಲ್ಲವನ್ನು ಮರೆಮಾಯಿಸಿತು ಒಂದು ಬಾಟಲ್ ಎಣ್ಣೆ ....


Monday, August 13, 2012

ನೆನಪಿನ ಆಳದಲಿ ......



ನಿನ್ನದೇ ನೆನಪು ನನಗೆ ಎಂದೆಂದೂ ...
          ಕೇಳುವೆಯ ಚೆಲುವೆ ನನ್ನ ಮನದಾಳದ ಮಾತೊಂದು .....


ಕತ್ತಲೆಯ ಮುಸುಕಲಿ ಕಾಲುದೀಪದ ಬೆಳಕಲಿ
          ಮಳೆಯ ಮಂಜಲಿ ಮೋಡದ ಮಬ್ಬಿನಲಿ
                                ನೀ ಮರೆಯಾದ ನೆನಪು ....

ತಂಗಾಳಿಯ ತಂಪಲಿ ಬಿಸಿಲಿನ ಬೇಗೆಯಲಿ
          ಮನಸ್ಸಿನ ಆಳದಲಿ ಕನಸಿನ ತಾಳದಲಿ
                                ನಿನ್ನ ಮುದ್ದಾಡಿದ ನೆನಪು ....

ಎದೆಯ ಭಡಿತದಲಿ ನಾಚಿಗೆಯ ಸುಳಿಯಲಿ
           ಸಂಕೋಚದ ಉತ್ತುಂಗದಲಿ  ಆಸೆಯ ಅಲೆಯಲಿ
                                ನಿನ್ನ ಕೈ ಹಿಡಿದ ನೆನಪು .....

ಪ್ರೀತಿಯ ಹಿಡಿತದಲಿ ಪ್ರೇಮದ ಜೊತೆಯಲಿ
           ಪ್ರಣಯದ ಗುಂಗಿನಲಿ ನಿನ್ನ ಜೊತೆ ಜೊತೆಯಲಿ
                                ಹೆಜ್ಜೆ ಇಟ್ಟ ನೆನಪು ...

ಹಕ್ಕಿಗಳ ಚಿಲಿಪಿಲಿ ರಾಗದಲಿ ಮುಂಜಾನೆಯ ಬೆಳಕಲಿ
          ಇಬ್ಬನಿಯ ತಂಪಿನಲಿ ನಮ್ಮೂರಿನ ಜಾತ್ರೆಯಲಿ
                                  ಕೈ ಕೈ ಹಿಡಿದು ನಡೆದಾಡಿದ ನೆನಪು ....

ಜೇನಿನಂತ ಮಾತಲಿ ಚಂದಿರನ ನೋಡಿದೆ ನಿನ್ನ ಮುಖದಲಿ ..
           ಕಾಯುವೆ ನಿನ್ನ ಕಣ್ಣಂಚಲಿ ಕಾವಲಿರುವೆ ನಾ ನಿನ್ನ ಕನಸಲಿ
                                   ಸದಾ ಪ್ರೀತಿಸುವೆ ನಿನ್ನ ನಾ ಮನದಲಿ  
                                               ಎಂದೆಂದೂ ನೀನಿರುವೆ ನನ್ನ ನೆನಪಲಿ .....



                   
     

Thursday, May 24, 2012

ಪೆಟ್ರೋಲ್.....




ಪೆಟ್ರೋಲ್  ಬೆಲೆ ಮುಗಿಲ  ಮುಟ್ಟಿದೆ ....
                      ಭಾರತ  ಜನತೆಗೆ ಬಿಸಿ ತಟ್ಟಿದೆ ....

ಟಾ  ಟಾ BYE  BYE ಮಾಡು  MOTORCYCLE ಗೆ ....
                       HELLO WELCOME ಅನ್ನು  BICYCLE ಗೆ ....

1 LITER PETROL ಗೆ 80+ Rs FIX....
                       ಯಾವನಿಗೊತ್ತು  ಅದಕ್ಕೆ ಏನೇನ್  ಮಾಡ್ತಾರೋ MIX...

HALF LITER PETROL BIKE ನಲಿ ...
                        ಜೇಬು PURSE ಎಲ್ಲಾ ಕಾಲಿ  ಕಾಲಿ ...

HIKE ಹೆಸರಲ್ಲಿ ಜಾಸ್ತಿ  ಆಗುತಿದೆ PETROL RATE....
                        ಯಾವನಾದ್ರು POLITICIAN ಸಿಕ್ಕರೆ ಮುಖಾ ಮೂತಿ ನೋಡದೆ  ಹಾಕೋಣ  ಚಪ್ಪಲಿ ಏಟು ...

ಇಂತ TIME ನಲಿ ಬೇಕ  GIRL FRIEND ????...
                        ಅನ್ಯಾಯವಾಗಿ  BICYCLE RIDER ಆಗು ಮುಂದ್ಗಡೆ   ಅವಳನ  ಕುಡಿಸ್ಕೊಂಡ್ ... 
               


Saturday, May 19, 2012

ನಿನ್ನ ನಾ ನೋಡಿದ ನೆನಪು



ಕತ್ತಲೆಯ  ಮುಸುಕಿನಲಿ ಕಾಲುದೀಪದ  ಬೆಳಕಿನಲಿ ನಿನ್ನ  ನಾ  ನೋಡಿದ  ನೆನಪು ...
ಬಿಸಿಲಿನ  ತಾಪದಲಿ ಗುಂಪಿನ  ಮದ್ಯದಲಿ  ನಿನ್ನ  ನಾ  ನೋಡಿದ  ನೆನಪು ...
ಮಳೆಯ  ಮಂಜಿನಲಿ ಮೋಡದ  ಮಬ್ಬಿನಲಿ ನಿನ್ನ  ನಾ  ನೋಡಿದ  ನೆನಪು ....
ಸೂರ್ಯನ  ತಾಪದಲಿ   ನೆರಳಿನ  ನಂಪಿನಲಿ  ನಿನ್ನ  ನಾ  ನೋಡಿದ  ನೆನಪು ....
ನವಿಲಿನ  ಒಯ್ಯಾರದಲಿ ಜಿಂಕೆಯ  ಬಿಂಕದಲಿ ನಿನ್ನ  ನಾ ನೋಡಿದ  ನೆನಪು ...
ವೋಲ್ವೋ  ಬಸ್ ನಲಿ ತಣ್ಣನೆಯ  AC ಯಲಿ  ಜನರ  ಮದ್ಯದಲಿ  ನಿನ್ನ  ನಾ ನೋಡಿದ  ನೆನಪು ...
ಬೆಂಗಳೂರು ಮಹಾನಗರಿಯಲಿ  TRAFFIC ಜಂಗಾಟದಲಿ ROAD CROSS  ಮಾಡುತಿಹ  ಸಮಯದಲಿ ನಿನ್ನ  ನಾ ನೋಡಿದ  ನೆನಪು ....
MOZILLA BROWSER ನಲಿ GOOGLE IMAGES ನಲಿ ನಿನ್ನ  ನಾ  ನೋಡಿದ  ನೆನಪು ....


ಕಣ್ಣು ಮುಚ್ಚಿದರೆ ಕಣ್ಣೆದುರಿಗೆ ಬಂದು ಮನಸ್ಸಿಗೆ  ಸ್ಪರ್ಶದ  ಮುದ  ನೀಡಿ  ಮುದ್ದಾದ  ನಗುವ  ಬೀರಿ ಮರೆಯಾಗುತಿಹ  ಚೆಲುವೆ  ನೀನ್ಯಾರು ...........

Saturday, April 14, 2012

ಪ್ರೀತಿ ..............


ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರೆಯಬಾರದು ..
ಪವಿತ್ರವಾದ  ಪ್ರೀತಿಗೆ ಬೆಲೆ ಕಟ್ಟಲಾಗದು.... 
ಚಂದಿರನ ಅಂಧವನು ಬಣ್ಣಿಸಲಾಗದು ....
ಮುಗಿಲಿನ ಚಿತ್ತಾರವ ಬಣ್ಣಿಸಲಾಗದು ...
 ಮಿನುಗುತಿಹ ನಕ್ಷತ್ರವ ಎಣಿಸಲಾಗದು ...
ವಿಶಾಲವಾಗಿ ಚಾಚಿರೋ ಭಾನನು ಅಳೆಯಲಾಗದು ...
ಪ್ರಜ್ವಲಿಸುವ ಸೂರ್ಯನನು ದಿಟ್ಟಿಸಿ ನೋಡಲಾಗದು  ..
ಮನಸ್ಸು ಅನ್ನೋ ಚಂಚಲತೆಯನು ನಿಯಂತ್ರಿಸಲಾಗದು ...
ಪರರ ನೋಡಿ ಅಸಹ್ಯ ಪಡಬಾರದು ...
ಅನ್ಯರಲ್ಲಿ ಕೈ ಚಾಚಬಾರದು...