Monday, January 30, 2012

ಮಾಡಬೇಡ ..... ಮಾಡಿದರು ಹೇಳಬೇಡ ...





FACEBOOK ಲಿ ಹೊಸ FACE ಗಾಗಿ ಹುಡುಕಾಡಬೇಡ ...
ಒಂದಾನೊಂದು ಕಾಲದಲ್ಲಿ ಸುಂದರ ಹುಡುಗಿಯರ ಹುಡುಕಾಟದಲ್ಲಿ ಕೈಜೋಡಿಸಿದ ORKUT ನು ಮರೆಯಬೇಡ  ...
+VE  ಆಗಿ ಬಂದಿರೋ GOOGLE +  ನ -VE ಅನ್ನಬೇಡ ...
ದೇವಸ್ತಾನದಲ್ಲಿ ಬಿಟ್ಟ ಚಪ್ಪಲಿಯನ್ನು GOOGLE ನಲಿ SEARCH ಮಾಡಬೇಡ ...
ಅವಳಿಗೆ POKE ಮಾಡಿ ಅವಳ BOY FRIEND ನಿಂದ POKED YOU BACK ಅನ್ಸ್ಕೊಬೇಡ....
ಅಪ್ಪಿ ತಪ್ಪಿ ಒಂದೇ ಮನೆಯ ಇಬ್ಬರು ಬಾಲೆಯರಿಗೆ FRIEND REQUEST ಕಳುಹಿಸಿ ಜೀವನದಲಿ TWIST ತಗೋಬೇಡ ...
BEST FRIEND LIST ಲಿ CUTE ಹುಡುಗಿನ ಹುಡುಕಬೇಡ ....
FRIEND REQUEST SEND ಮಾಡಿ MUTUAL FRIENDS ನ ನೋಡಬೇಡ ...
ಹುಡುಗಿಯರ PHOTO ಗೆ  LIKE ಮಾಡಿ ಬಡಪಾಯಿ ಹುಡುಗರ PHOTO ಗೆ DISLIKE OPTION ಹುಡುಕಬೇಡ .....
TOUCH SCREEN MOB ಬಂದ ಮೇಲೆ KEYPAD MOB ಮರೆಯಬೇಡ   ...
GIRL FRIEND ಪಕ್ಕದಲ್ಲಿರುವಾಗ ಅಕ್ಕ ಪಕ್ಕದ ಹುಡುಗಿಯರ ಮೇಲೆ ದ್ರಷ್ಟಿ ಹಾಯಿಸಬೇಡ ...
MISS CALL ಕೊಟ್ಟು CALL ಗಾಗಿ ಕಾಯೋ ಜಿಪುಣ ನೀನಾಗಬೇಡ ...
BMTC ಇರೋವಾಗ VOLVO ಗೆ ಕಾಯಬೇಡ ...




HOTEL ಲಿ 50 Rs TIPS  ಇಡೋ ನೀವು ರಸ್ತೆ ಬದಿಯಲ್ಲಿ ಬೇಡುವ ಕೈಗೆ 5 Rs ಹಾಕಲು ಯೋಚನೆ ಪಡುವವನು ನೀನಾಗಬೇಡ..
ಪರರ ನೋಡಿ ನೀ ನಗಬೇಡ ನಿನ್ನ ಕಾಲಡಿ ನೀ ನೋಡಲು ಮರೆಯಬೇಡ ...
COLLEGE DAYS ಲಿ SMILE ಕೊಟ್ಟೋರು ಈವಾಗ BUSY LIFE ಲಿ ಅವರಿಂದ SMILEY ನು EXPECT ಮಾಡಬೇಡ .
ಇಬ್ಬರ ಜಗಳಕ್ಕೆ ಆಪ್ತ ಸ್ನೇಹಿತನ ಮನಸ್ಸನು ನೋವು ಮಾಡಬೇಡ ...


ಇವೆಲ್ಲ ಮನದಾಳದ ಮಾತು ಮನಸ್ಸಿನಾಳದಿಂದ....



Thursday, January 26, 2012

ಕಂಗ್ಲಿಷ್ ವ್ಯಾಮೋಹ ....


ಇಂಗ್ಲಿಷ್ ಹಾವಳಿ ನಮ್ಮ ಕರುನಾಡ ನಾಡಲಿ   ...
ಕನ್ನಡ ಕೇಳೋರಿಲ್ಲ ಇವಾಗ ಇಲ್ಲಿ ....

Hey wats up ಇದು ಇಂಗ್ಲಿಷ್ Style...
ಹೇಳಿದ್ರೆ ಅದರ ಮೇಲೆ ಕುತ್ಕೊತ್ಯಾ ಇದು ನಮ್ಮ Style...

ಅ ಆ ಇ ಈ ನಮ್ಮ ಕಾಲದಲ್ಲಿ ....
Beep off ...Beep Off ಇವಾಗಿನ ಮಕ್ಕಳ ಬಾಯಲ್ಲಿ ...

ಹೇಳ್ಕೊಳಿಕೆ ಕನ್ನಡಿಗರು ನಾವಿಲ್ಲಿ ....
ಎಲ್ಲರೂ ಸೇರಿ ಕನ್ನಡವನ್ನು ಜಗತ್ತಿಗೆ ಪರಿಚಯಿಸೋಣ ಏನಂತೀರ ನೀವೇ ಹೇಳಿ ....
ಇದೆ ನನ್ನ ಕಳಕಳಿಯ ವಿನಂತಿ ನಿಮ್ಮಲ್ಲಿ ....

ಇಂಗ್ಲಿಷ್ ಬೇಕು ಆದರೆ ಕನ್ನಡ ಬೇಡ ಅನ್ನಬೇಡಿ ...
ಅಭಿಮಾನಗೋಸ್ಕರ   ಮಾತು ಹೇಳಿಕೊಟ್ಟ ತಾಯಿಯ  ಮರಿಬೇಡಿ ...
ತಾಯಿ ಬಾಷೆಯ ಬಿಟ್ಟು ಪರಭಾಷೆಯ ದಾಸರಾಗದಿರಿ  ....
ಇಂಗ್ಲಿಷ್ ವ್ಯಾಮೋಹ ಇರಲಿ ಆದರೆ ಅದೇ ಅತಿಯಾಗದಿರಲಿ ...



Wednesday, January 18, 2012

ಇದು MODERN ಗಾದೆ ಎತ್ತಬೇಡಿ ತಗಾದೆ......



ತಾಳಿದವನು ಬಾಳಿಯಾನು ...
ತಾಳಿ ಕಟ್ಟಿದವನು ಕೊನೆ ತನಕ ಜೊತೆಯಲಿ ಬಾಳುವನು ....


ಕೆರೆಯ ನೀರನು ಕೆರೆಗೆ ಚೆಲ್ಲಿ ......
METER ಇದ್ರೆ X GIRL FRIEND ನ ಮನಸ್ಸನ್ನು ಗೆಲ್ಲಿ ....

ಅವಸರವೇ ಅಪಾಯಕ್ಕೆ ಕಾರಣ ..
ಅವಳಿಗೆಗೆ CUTE ಆಗಿರೋ ತಂಗಿ ಇರಬಹುದು ಸ್ವಲ್ಪ ಕಾಯೋಣ ...

ಹಾಸಿಗೆ ಇದ್ದಷ್ಟು ಕಾಲು ಚಾಚು ...
ಪರರ GIRL FRIEND ನೋಡಿ ಪಡಬೇಡ ಹೊಟ್ಟೆ ಕಿಚ್ಚು ...

ಮಾಡಿದ್ದೋನೆ ಮಹಾಶೂರ ....
ಎಚ್ಚರ ತಪ್ಪಿದರೆ ಆಗ್ತೀರ ಪ್ರಯೋಜನಕ್ಕೆ ಬಾರದ ವೀರ ...

ಸೋಲೇ ಗೆಲುವಿನ ಸೋಪಾನ...
ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಯಾರಿಗೊತ್ತು ಜೋಪಾನ ...

ಒಗ್ಗಟ್ಟಿನಲ್ಲಿ ಬಲವಿದೆ ...
ಇವಾಗ ಅದು ಏನಂತ ತಿಳಿಯದಾಗಿದೆ ...

ಆನೆ ಕದ್ದರು ಕಳ್ಳ ಅಡಿಕೆ ಕದ್ದರು ಕಳ್ಳ ...
ಅವಳು ನನ್ನ ಮನಸ್ಸನ್ನು ಕದ್ದಳು ಕಳ್ಳಿ ಕ್ಯಾಕರ್ಸಿ ತು ಅಂತ ಉಗದ್ರೆ ಉಗಸ್ಕೊಲಿ ...


ಯಾರಿಗುಂಟು ಯಾರಿಗಿಲ್ಲಾ ....
ನನ್ನ ಮಾತು ಜೀವಕ್ಕೆ ಒಳ್ಳೆದಲ್ಲಾ ...

ದಯವಿಟ್ಟು ಕ್ಷಮಿಸಿ ಇದೆ ನಮ್ಮ POLICY ...



Tuesday, January 3, 2012

ಕತ್ತಲೆ ಬೆಳಕಿನ ಆಟದಲಿ...




ಕವಲು ದಾರಿಯಲಿ ಕವಲೊಡೆದ ಆಸೆ ....
ಬರಡು ಭೂಮಿಯಲಿ ಭ್ರಮಿಸಿದ ಸಹನೆ ....
ತನುವಿನ ಹಿಡಿತದಲಿ ತನ್ಮಯದ ಭಾವ ...
ಅಮ್ಮನ ಮಡಿಲಲಿ ಪ್ರೀತಿಯ ಧಾರೆ...
ತಂದೆಯ ನೆರಳಲಿ ಭವಿಷ್ಯದ ಆಸರೆ ......
ಹ್ರದಯದ ಮಿಡಿತದಲಿ ನನ್ನವಳ ಹಿಡಿತ ...
ಕತ್ತಲೆಯ ಆಳದಲಿ ಸ್ನೇಹವೆಂಬ ಬೆಳಕು .....
ಕತ್ತಲೆ ಬೆಳಕಿನ ಆಟದಲಿ ಪಾತ್ರಧಾರಿಗಳು ನಾವು .....




Sunday, January 1, 2012

'ಜೀವ' ನ ......




ಮಾನವನಲ್ಲಿ ಜೀವನವೆಂಬ ಕಲಹ ....
ತೀರದ ದಾಹ ...
ಆರದ ಮೋಹ ...
ಮಾಡ ಬೇಡ ದ್ರೋಹ ..
ಕೊನೆಗೆ ಮಣ್ಣಿಗೆ ಮಣ್ಣಾಗುವ ಈ ದೇಹ ...
ಎಂದೂ ಶಾಶ್ವತವಲ್ಲ....