Monday, January 31, 2011

ಜೊತೆ ಜೊತೆಯಲಿ ....


ನೀ ಭೂಮಿಯಾದರೆ ನಾನಾಗುವೆ ಭಾನು ....
ಮಳೆಯಾಗಿ ಧರೆಗಿಳಿಯುವೆ ನಿನ್ನ ಸೇರಲು ...
ಚಳಿಯಾಗಿ ಬರುವೆ ನಿನ್ನ ತಂಪಾಗಿರಿಸಲು ...
ಮೊಡವಾಗುವೆ ಬಿಸಿಲನ ತಡೆಯಲು ...
ಗಾಳಿಯಗುವೆ ನಿನ್ನ ಉಸಿರಾಗಲು ...
ನಾ ಬಯಸುವೆ ಎಂದೆಂದೂ ನಿನ್ನ ಜೊತೆಗಿರಲು ....
ನಿನ್ನ ಕೈ ಹಿಡಿದು ಬಾಳಲು ....

Wednesday, January 26, 2011

ಹುಡುಗರ ಪಾಡು ಭಲ್ಲವರಾರು ....


ಇದು ಮೋಸ ಹೋದ ನನ್ನ ಸ್ನೇಹಿತನಿಗಾಗಿ ...
ಇದು ಕೇವಲ Backgrnd ನೋಡಿ love ಮಾಡೋ ಹುಡುಗಿಯರಿಗಾಗಿ.. ಮೋಸ ಹೋಗೋ ಹುಡುಗರಿಗಾಗಿ ಕೆಲವು ಸಾಲುಗಳು ...

ಪ್ರೀತಿ ಕೊಟ್ಟ ಹುಡುಗಿ ಕೈ ಕೊಟ್ಟಳು ..
ಮನಸ್ಸ ಕೊಟ್ಟ ಹುಡುಗಿ time pass ಅಂದಳು ...
ಜೊತೆಗಿದ್ದು error ಹುಡುಕಿದವಳು ಕೊನೆಗೆ invalid selection ಅಂದಳು ..
ನೀನೆ diode ನಾನೆ capacitor ಅಂದವಳು whole circuit short ಮಾಡಿ ಹೊರಟು ಹೋದಳು  ,...
ನೀನೆ ನನ್ನ ಕನಸಿನ ರಾಜ ಅಂದವಳು ಕೇವಲ ಕನಸಾದಳು....
love ಮಾಡಿದವಳು dove ಮಾಡಿದಳು ...
propose ಮಾಡಿದವಳು dispose ಆದಳು....
ನನ್ನ ನಂಬು ಅಂದವಳು ಕೈಗೆ ಚೊಂಬು ಕೊಟ್ಟಳು ...
ನಾ ನಿನ್ನ ಮರೆಯಲಾರೆ ಅಂದವಳು ಎಲ್ಲೋ ಮರೆಯಾದಳು ...
ನೀನೆ ನನ್ನ ಜೀವ ಅಂದವಳು java ಕಲಿತವನ ಜೊತೆ ಪರಾರಿಯಾದಳು ...
ಮೊದ ಮೊದಲಿಗೆ hiii byeee ಅಂದವಳು ಕೊನೆಗೆ ಬಾವಿಗೆ ಬಿದ್ದು ಸಾಯಿ ಅನ್ನುವಳು ...
college days jolly days ಅಂದ ಹುಡುಗಿರು ಇವಾಗ ದುಡ್ಡೇ ದೊಡ್ಡಪ್ಪ ಅನ್ನುವರು ...
ಅವರು ಹೇಳಿದ ಕೆಲಸ ಮಾಡುವ ಹುಡುಗರು ಕೊನೆಗೆ ಆದರು use ಮಾಡಿದ tissue ಪೇಪರು ...
ಇಷ್ಟೆಲ್ಲಾ ಆದರು ಹಾಳಾದ್ ಹುಡುಗರ ಬುದ್ದಿ ಹೋಗ್ತಾವೆ ಹುಡುಗೀರ ಹಿಂದೆ ಮೋಸ ಹೋಗಲು ....

ಗಣರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು,..


ಇತಿಹಾಸದ ಇಂದಿನ ಈ ಕ್ಷಣ ....
ಸ್ಮರಿಸೋಣ ದೇಶಕ್ಕಾಗಿ ಪ್ರಾಣ ತೆತ್ತ ಮಹಾನ್ ನಾಯಕರುಗಳನ......
ಭಾರತದ ೬೧ ನೇ ಗಣರಾಜ್ಯೋತ್ಸವದ ದಿನ...
ರಚಿಸಲ್ಪಟ್ಟಿತು ಭಾರತ ಸಂವಿಧಾನ .....
ಎಲ್ಲರೂ  ಸೇರಿ ಸಲ್ಲಿಸೋಣ ಜಾತ್ಯತೀತ,ಪ್ರಜಾತಂತ್ರ ಭಾರತ ದೇಶಕ್ಕೆ  ನಮನ ...
ಜೈ ಹಿಂದ್....

Tuesday, January 25, 2011

ಹಿಂದುಸ್ತಾನಿ ಸಂಗೀತ ಸಾಮ್ರಾಟ್ ಭೀಮಸೇನ ಜೋಶಿ .....


ಭೀಮಸೇನ ಹೆಸರಲ್ಲಿದೆ ಸಿಂಚನ  ...
ಸ್ವರ ಮಾಂತ್ರಿಕನ ರಾಗ ತಾನ....
ಭಕ್ತಿ ,ಹಟ,ಶಕ್ತಿ ,ರಾಗ ,ತಾಳದ ದುರಿಣ ...
ಅವರ ಗಾಯನ ಶೈಲಿ ಇತರರಿಗಿಂತ ಬಿನ್ನ ...
ಅಲಂಕರಿಸಿದರು ಭಾರತ ರತ್ನ ...
ಕೇಳಿದರೆ ಕೇಳುತಲೇ ಇರಬೇಕೆನ್ನೋ ಅವರ ಗಾಯನ ....
ಇಂದು ನಮ್ಮೆಲರನ್ನು ಬಿಟ್ಟು ಸ್ವರ್ಗಾಲೀನರಾಗಿರೋ ಸಂಗೀತದ ಒಡೆಯ ಭೀಮಸೇನ ಜೋಶಿಯವರಿಗೆ ಭಕ್ತಿಪೂರ್ವಕ ಶ್ರಧಾಂಜಲಿ ಅರ್ಪಿಸೋಣ ....

Friday, January 21, 2011

ಇಂದು ನಾ ನೋಡಿದೆ ಚೆಲುವೆಯ ...



ಇಂದು ಹೋಗುತಾ ಇದ್ದೆ ಡಕೋಟ ಬಸ್ಸಿನಲಿ  ...
ಕೂತಿದ್ದೆ  back ಸೀಟಿನಲಿ ...
ಬಸ್ ನಿಂತಿತು ಮಣಿಪಾಲ್ standನಲಿ ....
ಚೆಲುವೆ ಒಬ್ಬಳು ಬಸ್ ಹತ್ತಿದಳು catwalkನಲಿ ..
shock ಹೊಡೆದಾಗ್  ಆಯಿತು heartನಲಿ  ...
ಕೂತಳು front cornerಲಿ ...
ಒಮ್ಮೆ ತಿರುಗಿ ನೋಡು ನನ್ನಲಿ ...
ನೋಡ್ತೀನಿ ನಿನ್ನನು ನಾನು front viewನಲಿ ...
ಕೊನೆಗೂ ಚೆಲುವೆಯ ನೋಡಿದೆ 3d angleನಲಿ ...
ಬಂದೆ ಬರುತಾಳೆ ಅವಳು ಇಂದಿನ ನನ್ನ ಕನಸಿನಲಿ ....  

Thursday, January 20, 2011

ಕೊಳಕು ರಾಜಕೀಯ .......


ಅ ಆ ಇ ಈ ಜ್ಞಾನವಿಲ್ಲದವ ಜನರಿಂದ ಆಯ್ಕೆಗೊಂಡ ಜನನಾಯಕ ...
ಮಾಡೋದು ಬರೀ ಕೆಟ್ಟ ಕಾಯಕ ...

ಕೈ ಎತ್ಬಿಟ್ಟು ದೇಹವನ್ನೂ ನುಂಗೋ  ಪಕ್ಷ ..
ನಂಬಿದರೆ ಕಮಲದ ಹೂ ೨ ಕಿವಿಗೆ ಇಡೋ ಪಕ್ಷ ..
ತಲೆ ಮೇಲೆ ಹೊರೆ ಹೊರಿಸಿ ಆಮೇಲೆ ಚಪಡಿ ಎಳೆಯೋ ಪಕ್ಷ ...
ಸಮಯಕ್ಕೆ ತಕ್ಕಂತೆ ಬದಲಾಗೋ ಅವರ ಕಕ್ಷ ....ಕರ್ಮ ಕಾಂಡ...

ಹೆಂಡತಿ ಮಕ್ಕಳ ಹೆಸರಲ್ಲಿ 10 - 12 ಸೈಟು...
ಅದಕ್ಕಾಗಿ ಮಾಡ್ತಾರೆ ಫೈಟು ...
ಇವರನ್ನು ನಂಬೋದು ಅಟ್ಟರ್ ವೇಸ್ಟು ...
ಸಿಕ್ಕಿದಾಗ ಕೊಡಿ ಅವರಿಗೆ ಬಿಟ್ಟಿ ಚಪ್ಪಲಿ ಏಟು ...

ನಾರಿಗೆ ಸೀರೆ ಕೊಟ್ಟ ಮುಖ್ಯಮಂತ್ರಿ ...
ನಂಬಿದರೆ ಅದೋ ಗತಿ ...
ಅವನೇ ಅಸ್ಸಾಮಿ ಕುಮಾರಸ್ವಾಮಿ ಕಮಲವನ್ನು ಸೆರೆಹಿಡಿತಾನೆ CDಯಿಂದ ...
ಆದರೆ ಮೋಸ ಹೋಗ್ಬಿಟ್ಟ ನಿತ್ಯಾನಂದ ...
ಆ ರೆಡ್ಡಿ ಸಹೋದರರು ...
ಚಡ್ಡಿ ಬಿಟ್ಟು ಎಲ್ಲಾನು ಮಾರಿ ತಿಂದಾರು....
ಅವನೇ ರಾಮುಲು ...
ನಂಬಿದರೆ ಜನರಿಗೆ ಟೋಪಿ ಮಾಮೂಲು ...

ಇದು ಇಂದಿನ ನಮ್ಮ ರಾಜಕೀಯ ...
ಅಪೇಕ್ಷಿಸಬೇಡಿ ಅವರಿಂದ ಎಂದಿಗೂ ಸಹಾಯ ...
ನಂಬಿದರೆ ಕೊಡ್ತಾರೆ ಚಂಬು ಎಲ್ಲರೂ ಸೇರಿ ..
ನಾವೆಲ್ಲರೂ ಕಟ್ಟೋಣ ಅವರಿಗಾಗಿ ಗೋರಿ ...

ಇವರು ಜನರಿಂದ ಜನರಿಗಾಗಿ ಜನರಿಗೋಸ್ಕರ ಆಯ್ಕೆಯಾದ ಮಂತ್ರಿಗಳು ..ತು ಅವರ ಬಾಯಿಗೆ ಮಣ್ಣು ಹಾಕ ...
ಇವು ಕೊಳಕು ರಾಜಕೀಯದ ಸಾಲುಗಳು .....



Monday, January 10, 2011

ಕ್ಷಮಿಸಿ ಇದು ಕೇವಲ ತಮಾಷೆಗಾಗಿ ...

ಇದು ಬೆಂಗಳೂರು ಯುವಕರ ಗೋಳುಗಳು....

ವೋಲ್ವೋ ಬಸ್ಸಿನ ತಣ್ಣನೆಯ ACಲಿ ಹಾಯಾಗಿ ಹೋಗೋ ಹುಡುಗಿರ Heartಗಳು ..
ವೋಲ್ವೋ ಹಿಂದ್ಗಡೆ  BMTCತರ ಅಡ್ಡ ದಿಡ್ಡಿ ಓಡೋ ಹುಡುಗುರ ಮನಸ್ಸುಗಳು ...
Love@ 30*40 ಸೈಟ್ ಗಳು  ...
ಪ್ರೀತಿಯ ದಾರಿ ತಪ್ಪಿಸೋ Flyoverಗಳು ...
ಗಲ್ಲಿ ಗಲ್ಲಿಗೂ ಮನಸ್ಸಿನ ಓಟಕ್ಕೆ ತಡೆಯಾಗಿರೋ Metro Constructionಗಳು  Traffic Signalಗಳು ..
Green Signalಗಾಗಿ ಕಾಯೋ ನಮ್ಮ ಕಷ್ಟಗಳು ...
ಹೆಣ್ಣು ಕೊಟ್ಟ ಮಾವನ ಹಾಗೆ ದಾರಿಗೆ ಅಡ್ಡ ಬರೋ Traffic Policeಗಳು...
Polution ಜೊತೆ Mixಆಗಿ Echo ಹೊಡಿತಾ ಇರೋ ಯೋಗರಾಜ್ ಬಟ್ರ Dialogueಗಳು ...
ಕೊನೆಗೂ ವೋಲ್ವೋ ಬಸ್ಸಲ್ಲಿ ಹಾಯಾಗಿ ಕೂತಿರೋದು ಸಿಕ್ಕಿಲ್ಲ ಅನ್ನೋ ನಮ್ಮ ಸಂಕಟಗಳು ...
ಇಂದಿಗೂ ಎಂದೆಂದಿಗೂ ಇದು ಮುಂದುವರಿಯುವ  ಕಥೆಗಳು .....

Tuesday, January 4, 2011

ನಿನಗಾಗಿ ........

ಅವಳ ಆ ಹೂವಿನಂತಹ ಮನಸ್ಸು ಸುವಾಸನೆಯನು ಭೀರುತಿದೆ...
ಅವಳ ಆ ನೋಟಕ್ಕೆ ಚಂದ್ರನೇ ಮರೆಯಾಗಿದೆ ....
ಅವಳ ಆ ನಗುವಿಗೆ ಸೂರ್ಯನೇ ಸುಟ್ಟು ಹೋಗೋ ಹಾಗಿದೆ...
ಅವಳ ಸ್ಪರ್ಶಕ್ಕೆ ಮೋಡ ಕರಗಿ ನೀರಾಗಿ ಧರೆಗಿಳಿದಿದೆ...
ಅವಳ ಆ ಸುಂದರ ನಡಿಗೆಗೆ ಮಂಜು ನಾಚಿ ಹನಿಯಾಗಿದೆ ...
ಅವಳ ಇಂಪಾದ ದ್ವನಿಗೆ ಮುತ್ತು ಉರುಳುತಿದೆ ....
ಚೆಲುವೆ ನೀ ಎಲ್ಲಿರುವೆ ...ನಿನಗಾಗಿ ನಾ ಕಾದಿರುವೆ ಕಾಯುತಿರುವೆ ...

Monday, January 3, 2011

ಹೊಸ ವರುಷ ಹೊಸತನ ತರಲಿ ...

ಹೊಸ ವರುಷ ತರಲಿ ನಿಮಗೆ ಹರುಷ ...
ಹೊಸ ವರುಷದ ಕಲ್ಪನೆಯೇ ರೋಮಾಂಚಕ ...
ಹೊಸ ಹೊಸ ನಿರೀಕ್ಷೆಗಳು ಅಷ್ಟೇ ಉತ್ಸಾಹದಾಯಕ ...
ಮಾಡಬೇಡಿ ಕೆಟ್ಟ ಕಾಯಕ ....
ಬಯಸಬೇಡಿ ಅನ್ಯರಿಗೆ ಕೆಡುಕ ....
ಭೂತಕಾಲದ ಧುಖವನು ಮರೆತು ...
ವರ್ತಮಾನದ ಸಂತೋಷದಲ್ಲಿ ಬೆರೆತು ...
ಭವಿಷ್ಯತ್ ಎನ್ನೋ ಆಕಾಂಕ್ಷೆಯನು ಅರಿತು ...
ಸಂತೊಷ ಉತ್ಸಾಹದಿಂದ ಹೊಸ ವರುಷವನು ಭರಮಾಡಿಕೊಳ್ಳೋಣ ..

ಹೊಸ ವರುಷದ ಶುಭಾಶಯಗಳು ...