Monday, December 27, 2010

ಕಿವಿಮಾತು ...

ಅಂತ್ಯವಿಲ್ಲದೆ ಚಾಚಿಕೊಂಡಿರೋ ಬಾನಂಗಳದಿ ...
ವಜ್ರದಂತೆ ಹೊಳಪಿನಿಂದ ಕಂಗೊಳಿಸೋ ನಕ್ಷತ್ರಗಳು ...
ಬಾನಿಗೆ ದ್ರಷ್ಟಿಬಟ್ಟು ಇಟ್ಟಂತೆ ಬಾಸವಾಗುವ ಆ ಚಂದ್ರನ ಆಕರ್ಷಣೆ ....
ಸದಾ ಇತರರಿಗೆ ಬೆಳಕನು ಕೊಡುವ ಪ್ರಕಾಶಿಸುವ ಸೂರ್ಯ....
ಬಾನಿಗೆ ಮುತ್ತಿಕುವ ಬೆಟ್ಟ ಗುಡ್ಡಗಳು....
ಸಕಲ ಜೀವ ರಾಶಿಗಳಿಗೆ ಅಸರೆಯಾಗಿರೋ ಭೂತಾಯಿ ಮಡಿಲು....
ಇಂಥ ಪ್ರಕ್ರತಿಯ ಆಸರೆಯಲ್ಲಿರೋ ನಾವುಗಳು ಇದರ ಸೊಬಗನ್ನು ನೋಡಿ ಆನಂದಿಸಿ...
ಹೊರತು ಮರ ಗಿಡ ಕಡಿದು ಪ್ರಕ್ರತಿಯ ಮುನುಸಿಗೆ ಒಳಗಾಗಿ...
ಸೂರ್ಯನ ಕಂಗೆಣ್ಣೀಗೆ ಗುರಿಯಾಗಿ ಬೆಂದು ಕರುಕಲಾಗಿ...
ಸುನಾಮಿಯಂತ ರಕ್ಕಸ ಅಲೆಗಳನ್ನು ಎದುರಿಸಿ ...
ನಮ್ಮ ಗುಂಡಿ ನಾವೇ ತೋಡಿಕೊಂಡು ಭೂತಾಯಿಯ ಅಂತ್ಯಕ್ಕೆ ಕಾರಣರಗೋದು ಬೇಡ...

ಮರ ಗಿಡ ಕಾಡು ರಕ್ಷಿಸೋಣ.,...ನಾಡು ಉಳಿಸೋಣ ...    

Thursday, December 23, 2010

ಕಣ್ಣಿಗೆ ಕಾಣುವ ದೇವರು

ಕಣ್ಣಿಗೆ ಕಾಣುವ ದೇವರು ತಂದೆ ತಾಯಿ...
ಆ ತಾಯಿಯ ಮಕ್ಕಳು ನಾವು..

ಅಸಾದ್ಯ ನೋವನ್ನು ಸಹಿಸಿ..
ತನ್ನ ಕರುಳಿನ ಕುಡಿಯ ಉಳಿಸಿ..
ಪುಟ್ಟ ಪುಟ್ಟ ಹೆಜ್ಜೆಗೆ ಕೈ ಹಿಡಿದು ನಡೆಸಿ..
ಚಂದ ಮಾಮ ಕಥೆ ಹೇಳುತ ಕೈ ತುತ್ತು ತಿನ್ನಿಸಿ..

ಆ ತಾಯಿಯ ಬೆಚನೆಯ ಮಡಿಲಲಿ ಬೆಳೆದು..
ಎದೆಹಾಲೆಂಬ ಅಮ್ರಥವ ಕುಡಿದು..
ಅಮ್ಮ ಎನ್ನುವ ಮೊದಲ ಪದದಿಂದ ಮಾತನಾಡಲು ಕಲಿತು ..
ಸಮಾಜದೊಂದಿಗೆ ಬೆರೆತು ...
ಜೀವನ ನಡೆಸಲು ಕಲಿತು ....
ಬುದ್ಧಿ ಬಂದ ಮೇಲೆ ಪ್ರೀತಿಯ ವ್ಯಮೋಹಕೆ ಬೆರೆತು ಸಾಕಿ ಸಲುಹಿದ ತಂದೆ ತಾಯಿಯ ಮರೆತು ಇದ್ದು ಇಲ್ಲದವರಾಗದೆ..
ತಂದೆ ತಾಯಿ ಎನ್ನೋ ದೇವರ ಸೇವೆ ಮಾಡಿ ಅವರಿಗೆ ಎಂದೆಂದೂ ಋಣಿಯಾಗಿರಿ.....

Monday, December 20, 2010

ಸ್ನೇಹದ ಸೇತುವೆ

ನನ್ನ ಪ್ರೀತಿಯ ಗೆಳೆಯ ಗೆಳತಿಯರಿಗೆ  ಈ ನನ್ನ ಪ್ರೀತಿಯ ಕವನ ....

ಹತಾಶೆಯ ಕರಿನೆರಳನ್ನು ಹೋಗಲಾಡಿಸುತ  .....
ಕಷ್ಟದ ಸಂಕೋಲೆಯನು ಬಿಡಿಸುತ ...
ದುಃಖವನ್ನು ಹಂಚಿಕೊಳ್ಳುತ...
ಸಂತೋಷದ ಸಮಯದಲಿ ಭಾಗಿಯಾಗುತ....
ಹಿಗ್ಗಿದಾಗ ಬುದ್ಧಿಮಾತು ಹೇಳುತ....
ಕುಗ್ಗಿದಾಗ ಬೆನ್ನುತಟ್ಟಿ ಹುರಿದುಂಬಿಸುತ....
ಸದಾ ಜೊತೆ ಜೊತೆಯಲಿ ನಗುತ ನಗಿಸುತ ಮನಸ್ಸಿಂದ ಮನಸ್ಸಿಗೆ ಸ್ನೇಹದ ಸೇತುವೆಯಿಂದ ಸದಾ ನಗು,ಸಂತೋಷದ ಇಂಪನ್ನು ಸಿಂಪಡಿಸುತಿರುವ ಸ್ನೇಹಿತರಿಗೆ ನಾನು ಎಂದೆಂದೂ ಚಿರರುಣಿ....

Sunday, December 19, 2010

ಸ್ನೇಹಿತೆಯನ್ನು ಪ್ರೀತ್ಸೋದ್ ತಪ್ಪಾ?????

ನಿನಗೆ ನಾ ಕೊಡಬಯಸಿದೆ ಪ್ರೀತಿಯ ಉಡುಗೊರೆ...
ನೀ ಒಮ್ಮೆಯೂ ತಿರುಗಿ ನೋಡಲಿಲ್ಲ ನನ್ನ ಮನ ಕರೆದರೆ ....
ಆ ದಿನ ನಾ ನೋಡಬಾರದಿತ್ತು ಆ ನಿನ್ನ ಮುಗುಳ್ನಗು...
ಆ ನಗು ನನಗಿಲ್ಲವೆಂದು ಮುಜುಗರ ಪಡುವುದು ಆ ಮಗು...
ನನಗೆ ಗೊತ್ತು ಯಾವ ದಿಕ್ಕಿನಿಂದಲೂ ನಾ ಸರಿದೂಗುವುದಿಲ್ಲ ನಿನಗೆಂದು ...
ಆದರೆ ನನ್ನ ಮನ ಕೂಗಿ ಹೇಳುತಿದೆ ನಿನ್ನ ಮರೆಯಲಾರೆ ಎಂದೆಂದೂ ...
ನನ್ನ ಮೇಲೆ ನಿನಗೇಕೆ ಈ ಕೋಪ ....
ನೀ ಹೇಳು ಸ್ನೇಹಿತೆಯನ್ನು ಪ್ರೀತ್ಸೋದ್ ತಪ್ಪಾ?????

Friday, December 17, 2010

ಮಧುರ ಜೀವನ

ಜೀವನವೆಂಬ ದೋಣಿಯ ಏರುತ ....
ಬಾಲ್ಯವೆಂಬ ದಡದಿಂದ ಪಯಣ ಪ್ರಾರಂಭಿಸುತ....
ಯವ್ವನ ವೆಂಬ ಸುಂದರ ಅಲೆಯ ಸೀಳುತ ....
ಮದುವೆ ಅನ್ನೋ ತಂಗಾಳಿಯ ಅನುಭವಿಸುತ,,,,
ಕರುಳಿನ ಕುಡಿಯನು ಸ್ಮರಿಸುತ .....
ಕಷ್ಟ ದುಃಖಗಳೆಂಬ ಬಿರುಗಾಳಿಯನ್ನು ಬೇಧಿಸುತ....
ವ್ರಧಾಪ್ಯದ ಸುಳಿಗ ಸಿಲುಕುತ....
ಸುಳಿಯಲ್ಲಿ ಸಿಲುಕಿ ಸಮುದ್ರದ ಮಡಿಲಿಗೆ ಸೇರೋ ಆ ಕ್ಷಣವನ್ನು ನೆನಪಿಸುತ ನಾವೂ ಈ ಜೀವನವೆಂಬ ಧೋಣಿಯನ್ನು ಜಾಗರೂಕತೆಯಿಂದ ಸಾಗಿಸೋಣ ...

Wednesday, December 15, 2010

ನನ್ನ ಮನದ ಮೊದಲನೆಯ ಕವನ ....

ಮನದಾಳದ ಮಾತಿನ ಮದುರತೆಯ ತಿಳಿದು ಮಾಧುರ್ಯದ ಬಿಂದಿಗೆ ಸಿಕ್ಕಿ ಸಹನೆಯ ಮೀರಿ ಪ್ರಯತ್ನಿಸಿ ಗಾಂಬ್ಬೀರ್ಯವ ಅರಿತು ವಿಲ ವಿಲ ಒದ್ದಾಡುವ ಈ ಚೆಂಚಲ ಮನಸ್ಸನ್ನು ಅರಿಯುವ ಸಾಹಸಕ್ಕೆ ಎಂದಿಗೂ ಹೋಗಬೇಡಿ  .....