ನಿನ್ನದೇ ನೆನಪು ನನಗೆ ಎಂದೆಂದೂ ...
ಕೇಳುವೆಯ ಚೆಲುವೆ ನನ್ನ ಮನದಾಳದ ಮಾತೊಂದು .....
ಕತ್ತಲೆಯ ಮುಸುಕಲಿ ಕಾಲುದೀಪದ ಬೆಳಕಲಿ
ಮಳೆಯ ಮಂಜಲಿ ಮೋಡದ ಮಬ್ಬಿನಲಿ
ನೀ ಮರೆಯಾದ ನೆನಪು ....
ತಂಗಾಳಿಯ ತಂಪಲಿ ಬಿಸಿಲಿನ ಬೇಗೆಯಲಿ
ಮನಸ್ಸಿನ ಆಳದಲಿ ಕನಸಿನ ತಾಳದಲಿ
ನಿನ್ನ ಮುದ್ದಾಡಿದ ನೆನಪು ....
ಎದೆಯ ಭಡಿತದಲಿ ನಾಚಿಗೆಯ ಸುಳಿಯಲಿ
ಸಂಕೋಚದ ಉತ್ತುಂಗದಲಿ ಆಸೆಯ ಅಲೆಯಲಿ
ನಿನ್ನ ಕೈ ಹಿಡಿದ ನೆನಪು .....
ಪ್ರೀತಿಯ ಹಿಡಿತದಲಿ ಪ್ರೇಮದ ಜೊತೆಯಲಿ
ಪ್ರಣಯದ ಗುಂಗಿನಲಿ ನಿನ್ನ ಜೊತೆ ಜೊತೆಯಲಿ
ಹೆಜ್ಜೆ ಇಟ್ಟ ನೆನಪು ...
ಹಕ್ಕಿಗಳ ಚಿಲಿಪಿಲಿ ರಾಗದಲಿ ಮುಂಜಾನೆಯ ಬೆಳಕಲಿ
ಇಬ್ಬನಿಯ ತಂಪಿನಲಿ ನಮ್ಮೂರಿನ ಜಾತ್ರೆಯಲಿ
ಕೈ ಕೈ ಹಿಡಿದು ನಡೆದಾಡಿದ ನೆನಪು ....
ಜೇನಿನಂತ ಮಾತಲಿ ಚಂದಿರನ ನೋಡಿದೆ ನಿನ್ನ ಮುಖದಲಿ ..
ಕಾಯುವೆ ನಿನ್ನ ಕಣ್ಣಂಚಲಿ ಕಾವಲಿರುವೆ ನಾ ನಿನ್ನ ಕನಸಲಿ
ಸದಾ ಪ್ರೀತಿಸುವೆ ನಿನ್ನ ನಾ ಮನದಲಿ
ಎಂದೆಂದೂ ನೀನಿರುವೆ ನನ್ನ ನೆನಪಲಿ .....