Thursday, March 29, 2012

ಅಕ್ಕ - ತಂಗಿ...


ಕೇಳುವೆಯ ಮನದಾಳದ ಮಾತೊಂದಾ ....
ಈ ಸಾಲುಗಳು ಅಣ್ಣನಾಗಿ ತಮ್ಮನಾಗಿ ಹೇಳುತಿರುವೆ ಪ್ರೀತಿಯಿಂದ ....


ಅಕ್ಕನ ಅಕ್ಕರೆಯ ಮಾತೊಂದು ಚೆಂದ ...
ತಂಗಿಯ ಮುದ್ದಾದ ಆ  ನಗುವ ನೋಡಲು ಅಂದ ...
ನಾ ಪಡೆದಿರುವೆ ಪ್ರೀತಿ ಸಂತೋಷ ನಿಮ್ಮಿಂದ ...
ಕಷ್ಟ ಸುಖ ದುಃಖಗಳಿಗೆ ಆಸರೆಯಾಗಿರುವೆ ನಾ ಸದಾ ...
ಹರುಷವಿರಲಿ ನಿಮ್ಮ ಬಾಳಲಿ ಪ್ರತಿ ವರುಷ ...
ಇದೆ ನನ್ನ ಹಾರೈಕೆ ನಿಮಗೆ ಪ್ರೀತಿಯ ತಮ್ಮ (ಅಣ್ಣ ) ನಿಂದ ......  

Saturday, March 3, 2012

ರೌಡಿ ವಕೀಲ......















ಪವಿತ್ರವಾದ ನ್ಯಾಯ ದೇವತೆಯ ಮುಂದೆ ವಾದ ಮಂಡಿಸೋ ವಕೀಲ ....
ವಕೀಲರೆ ನಿಮಗೇನು ಬಂತು ಕೆಟ್ಟ ಕಾಲ ....
ನಿಮಗೇನು ಮಾನ ಮರ್ಯಾದೆ ಏನು ಇಲ್ವಾ ...
ಮಾಡೋಕೆ ಬೇರೆ ಕೆಲಸ ಇಲ್ಲಾ ...ಅಮಾಯಕರ ತಲೇನ ಓಡಿತಿರಲ್ಲಾ ...
ನ್ಯಾಯ ದೇವತೆಗೆ ಅವಮಾನ ಮಾಡಿದ ನಿಮಗೆ ಶಿಕ್ಷೆ ಕೊಡೋರಿಲ್ವ ....
ಇನ್ಮುಂದೆ ಕಪ್ಪು ಕೋಟು ದರಿಸೋ ಅರ್ಹತೆ ನಿಮಗಿಲ್ಲಾ ....
ವಕೀಲ ಅನ್ನೋ ಪದಕ್ಕೆ ಅರ್ಹರು ನೀವಲ್ಲ .......