Monday, September 15, 2014




.......HAPPY ENGINEERS DAY .....

ಅಂದಿಗು ಇಂದಿಗು ಹೋಲಿಕೆ ಇಲ್ಲದ ದಿನಗಳು .....
ಅಂದು ECE,CS,EEE,IS,Mech,Civil Branch ಗಳು ...  ಇಂದು Software/Testing/ QA Engineer ಗಳು ..
ಅಂದು Diode,Capacitor,Transistor ಗಳು ...ಇಂದು Java,C,C++,.net Programming Language ಗಳು .. 
ಅಂದು Internal/External Examಗಳು ... ಇಂದು Software Estimation/Timeline/Deadline ಗಳು
ಅಂದು Lecturer ಗಳ ಬೈಗುಳಗಳು ...ಇಂದು TL ಗಳ feedback ಗಳು ... 
ಅಂದು ದೊಡ್ಡ GROUND ಲಿ Cricket/Volleyball ಆಟಗಳು ..ಇಂದು Office Cubicle ಲಿ ನಾವುಗಳು ನಮ್ಮ ಜೊತೆಯಲಿ Keyboard,Mouse,Monitor ಗಳು ...
ಅಂದು Night Out Joke/Cinema ಗಳು .. ಇಂದು Overnight Office ಕೆಲಸಗಳು ...
ಅಂದು Marks Card ಲಿ Marks ಗಳನು ನೋಡುತಿಹ ದಿನಗಳು ...ಇಂದು Salary Statement ನೋಡುತಿಹ ಕಣ್ಣುಗಳು ...
ಅಂದು ಸಂತೋಷವನು ನೋಡುತಿಹ ಮನಸ್ಸುಗಳು ... ಇಂದು ದುಡ್ಡಿನ ಕಡೆ ಮುಖ ಮಾಡಿದ ದಿನಗಳು ...

- ಪವನ್


Tuesday, April 8, 2014

ತಾಳ್ಮೆ...



ಸುಡುಬಿಸಿಲಿನ ತಾಪಕೆ ಮುದುಡಿದ ಗಿಡವು ಬಹುದಿನದಿ ಅಪೇಕ್ಷಿಸುತಿಹ ಆ ಒಂದು ಹನಿ ನೀರು
ಗುಡುಗಿನ ಸದ್ದಿನಲ್ಲಿ ಮಿಂಚಿನ ನಡುವಲಿ ಮೋಡ ಕರಗಿ ನೀರಾಗಿ ನಿನ್ನ ಮೇಲೆ ಬೀಳುತಿರಲು
ಉಲ್ಲಾಸವು ಚಿಗುರೊಡೆದು ಭವಿಷ್ಯತ್ ಅನ್ನೋ ಹಸಿರು ಕಂಗೊಳಿಸುತಿಹ ಈ ಕ್ಷಣದಲಿ
ನಿನ್ನ ನಾ ನೋಡಿ ಕಲಿತೆ ಜೀವನವೊಂದು ನಶ್ವರ
ಮನವೇ ನೀ ಎಂದೆಂದೂ ಮರುಗಬೇಡ 
ನಿನ್ನ ಸಮಯ ಬಂದೆ ಬರುತದೆ ಒಂದು ದಿನ
ಆ ಒಂದು ಸಣ್ಣ ಹನಿಗೆ ತಾಳ್ಮೆಯಿರಲಿ ನಿರಂತರ...