ಸುಡುಬಿಸಿಲಿನ ತಾಪಕೆ ಮುದುಡಿದ ಗಿಡವು ಬಹುದಿನದಿ ಅಪೇಕ್ಷಿಸುತಿಹ ಆ ಒಂದು ಹನಿ ನೀರು
ಗುಡುಗಿನ ಸದ್ದಿನಲ್ಲಿ ಮಿಂಚಿನ ನಡುವಲಿ ಮೋಡ ಕರಗಿ ನೀರಾಗಿ ನಿನ್ನ ಮೇಲೆ ಬೀಳುತಿರಲು
ಉಲ್ಲಾಸವು ಚಿಗುರೊಡೆದು ಭವಿಷ್ಯತ್ ಅನ್ನೋ ಹಸಿರು ಕಂಗೊಳಿಸುತಿಹ ಈ ಕ್ಷಣದಲಿ
ನಿನ್ನ ನಾ ನೋಡಿ ಕಲಿತೆ ಜೀವನವೊಂದು ನಶ್ವರ
ಮನವೇ ನೀ ಎಂದೆಂದೂ ಮರುಗಬೇಡ
ನಿನ್ನ ಸಮಯ ಬಂದೆ ಬರುತದೆ ಒಂದು ದಿನ
ಆ ಒಂದು ಸಣ್ಣ ಹನಿಗೆ ತಾಳ್ಮೆಯಿರಲಿ ನಿರಂತರ...
No comments:
Post a Comment