Sunday, February 26, 2012

ಅಮ್ಮ .....






















ಅಕ್ಕರೆಯ ಮಡಿಲಲಿ ಪ್ರೀತಿಯ ನೆಲೆಯಲಿ ಆರೈಸಿದೆ  ನೀ ...
ಪುಟ್ಟ ಪುಟ್ಟ ಹೆಜ್ಜೆಗೂ ದಾರಿ ತೋರಿಸಿದಾಕೆ ನೀ ...
ಕೈತುತ್ತು ತಿನಿಸುತ ಚಂದ್ರನ ಪರಿಚಯಿಸಿದವಳು ನೀ ...
ಸರಿ ತಪ್ಪುಗಳನು ತಿದ್ದಿದಾಕೆ ನೀ ....
ಮುಸುಕಿನ ಮಾಯೆಗೆ ಬೆಳಕಿನ ಛಾಯೆ ಹರಿಸಿದವಳು ನೀ ...
ಹತಾಶೆಯ ಕಾರ್ಮೋಡ ಮುಸುಕಿದಾಗ  ಉತ್ಸಾಹದ ಸ್ಪರ್ಶ ಕೊಟ್ಟಿರುವೆ ನೀ ...
ನಿರಾಸೆಯ ಸುಳಿಯಲಿರುವಾಗ  ಆಸರೆಯಾದೆ  ನೀ ...
ಅಮ್ಮ ... ಕಣ್ಣಿಗೆ ಕಾಣುವ ದೇವರಂತಿರುವ ನೀ ...
ನಿನಗೆ ಹೇಗೆ ಹೇಳಲಿ  ಕ್ರತಜ್ಞತೆಯನು ನಾ...
ಎಂದೆಂದಿಗೂ ನಿನಗೆ ಚಿರಋಣಿಯಾಗಿರುವೆ ನಾ.....














ನಿನ್ನಿಂದಲೇ ........



ಸದಾ ನಿನ್ನದೇ ನೆನಪು ಅಂತ ನಾನೇನು ಹೇಳುತ್ತಿಲ್ಲ  ...
ಆದರೆ ನಿನ್ನ ಬಿಟ್ಟು ಬೇರೇನೂ ನೆನಪು ನನಗೆ ಆಗೋದಿಲ್ಲ  ...

ಈ ಮನದಾಳದ ಮಾತು ನಿನಗಾಗಿ  ಬರಿತಾ ಇಲ್ಲಾ ...
ಆದರೆ  ಪ್ರತಿಯೊಂದು ಅಕ್ಷರದಲಿ ನೀನು ಇರುತಿಯಲ್ಲ ...

ನೀನಿಲ್ಲದೆ ನನಗೆ ಬಾಳೋಕೆ ಆಗೋಲ್ಲಾ ಅಂತ ಏನು ಇಲ್ಲಾ ...
ನೀನಿಲ್ಲದ ಬದುಕು ನನಗೆ ಇಷ್ಟ ಇಲ್ಲಾ ...

ನನ್ನ  ಜೊತೆಯಲಿ ಪ್ರತಿಕ್ಷಣ ನೀನಿರುವೆಯ ಅಂತ ಕೇಳಲಾ ???   ...
ನಿನಗೆ ನಾ ಕೊನೆತನಕ ನೆರಳಾಗಿ ಸದಾ ಇರುವೆ ಅಂತ ಹೇಳಲಾ ????...