ಕತ್ತಲೆಯ ಮುಸುಕಿನಲಿ ಕಾಲುದೀಪದ ಬೆಳಕಿನಲಿ ನಿನ್ನ ನಾ ನೋಡಿದ ನೆನಪು ...
ಬಿಸಿಲಿನ ತಾಪದಲಿ ಗುಂಪಿನ ಮದ್ಯದಲಿ ನಿನ್ನ ನಾ ನೋಡಿದ ನೆನಪು ...
ಮಳೆಯ ಮಂಜಿನಲಿ ಮೋಡದ ಮಬ್ಬಿನಲಿ ನಿನ್ನ ನಾ ನೋಡಿದ ನೆನಪು ....
ಸೂರ್ಯನ ತಾಪದಲಿ ನೆರಳಿನ ನಂಪಿನಲಿ ನಿನ್ನ ನಾ ನೋಡಿದ ನೆನಪು ....
ನವಿಲಿನ ಒಯ್ಯಾರದಲಿ ಜಿಂಕೆಯ ಬಿಂಕದಲಿ ನಿನ್ನ ನಾ ನೋಡಿದ ನೆನಪು ...
ವೋಲ್ವೋ ಬಸ್ ನಲಿ ತಣ್ಣನೆಯ AC ಯಲಿ ಜನರ ಮದ್ಯದಲಿ ನಿನ್ನ ನಾ ನೋಡಿದ ನೆನಪು ...
ಬೆಂಗಳೂರು ಮಹಾನಗರಿಯಲಿ TRAFFIC ಜಂಗಾಟದಲಿ ROAD CROSS ಮಾಡುತಿಹ ಸಮಯದಲಿ ನಿನ್ನ ನಾ ನೋಡಿದ ನೆನಪು ....
MOZILLA BROWSER ನಲಿ GOOGLE IMAGES ನಲಿ ನಿನ್ನ ನಾ ನೋಡಿದ ನೆನಪು ....
ಕಣ್ಣು ಮುಚ್ಚಿದರೆ ಕಣ್ಣೆದುರಿಗೆ ಬಂದು ಮನಸ್ಸಿಗೆ ಸ್ಪರ್ಶದ ಮುದ ನೀಡಿ ಮುದ್ದಾದ ನಗುವ ಬೀರಿ ಮರೆಯಾಗುತಿಹ ಚೆಲುವೆ ನೀನ್ಯಾರು ...........
No comments:
Post a Comment